ಪಿಶೆಲ್, ರಿಚರ್ಡ್
1850-1908. ಪ್ರಾಕೃತ ಭಾಷೆಗಳ ಆಳವಾದ ಪರಿಶ್ರಮವಿದ್ದ ಈತ ಸಂಸ್ಕøತ ನಾಟಕಗಳಲ್ಲಿ ಪ್ರಾಕೃತ ಭಾಷೆಯ ಸ್ಥಾನವೇನು ಎಂಬ ಬಗ್ಗೆ ವಿಶೇಷವಾಗಿ ವಿಚಾರ ಮಾಡಿದ್ದಾನೆ. ಗದ್ಯಕ್ಕೆ ಶೌರಸೇನಿ ಹಾಗೂ ಪದ್ಯದಲ್ಲಿ ಮಹಾರಾಷ್ಟ್ರಿ ಭಾಷೆಗಳು ಉಪಯೋಗಿಸಲ್ಪಡುತ್ತಿದ್ದವೆಂದು ಈತನ ಮತ. ಅಭಿಜ್ಞಾನ ಶಾಕುಂತಲ ನಾಟಕವನ್ನು ಈತ ಇಪ್ಪತ್ತೊಂದು ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಿದ್ದಾನೆ. (1870). ಬೊಂಬೆಯಾಟದಿಂದ ನಾಟಕ ಅಂಕುರಿಸಿತೆಂದು ಇವನ ಅಭಿಪ್ರಾಯ. ವೈದಿಕ ಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಗಳಿಸಿದ ವೆಡಿಷೆಷ್ಟೂಡಿಯೆನ್ ಎಂಬ ಗ್ರಂಥವನ್ನು ಈತ ಗೆಲ್ಡ್‍ನರ್‍ವ ಜೊತೆ ಸಿದ್ಧಪಡಿಸಿದ್ದಾನೆ.
(ಬಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ